
17th October 2024
ಬಳ್ಳಾರಿ: ಸುಪ್ರೀಮ್ಕೋರ್ಟ್ನ ತೀರ್ಪಿನಂತೆ, ರಾಜ್ಯ ಸರ್ಕಾರವು ಈ ಕೂಡಲೇ ಪರಿಶಿಷ್ಠ ಜಾತಿಯಲ್ಲಿನ `ಒಳ ಮೀಸಲಾತಿ’ಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ, ಇಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪರಿಶಿಷ್ಠ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ಪರಿಶಿಷ್ಠ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು, ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿವೆ ಎಂದು ಸುಪ್ರೀಮ್ಕೋರ್ಟ್ನ ಸಾಂವಿಧಾನಿಕ ಪೂರ್ಣ ಪೀಠವು ಕಳೆದ ಆ.1 ರಂದು ಐತಿಹಾಸಿಕ ತೀರ್ಪು ನೀಡಿದೆ. ಆದುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಧರಣಿ ನಡೆಸಲಾಯಿತು.
ಒಳಮೀಸಲಾತಿ ಜಾರಿಗೆ ಬದ್ಧ ಎಂದು ಹೇಳುತ್ತಿರುವ ರಾಜ್ಯ ಸರ್ಕಾರವು ಎರಡೂವರೆ ತಿಂಗಳುಗಳು ಕಳೆದರೂ, ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ನಿಜಕ್ಕೂ ದುರದೃಷ್ಟಕರ. ಸುಪ್ರೀಮ್ಕೋರ್ಟ್ ತೀರ್ಪನ್ನು ತಕ್ಷಣವೇ ರಾಜ್ಯ ಸರ್ಕಾರವು ಜಾರಿಗೆ ತರಬೇಕು. ಈ ತಿಂಗಳೊಳಗಡೆ ಜಾರಿಗೊಳಿಸದಿದ್ದಲ್ಲಿ ಹೋರಾಟ ಸಮಿತಿಯು ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಿದೆ. ಈ ಕುರಿತಂತೆ ನಿರ್ಲಕ್ಷö್ಯ ತೋರಿದಲ್ಲಿ, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಸಮಿತಿಯು ಎಚ್ಚರಿಸಿದೆ.
ಪರಿಶಿಷ್ಠ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಹೆಚ್.ಹನುಮಂತಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಧುರೀಣರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರವು ಕೂಡಲೇ ಒಳಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು.
ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಒಳ ಮೀಸಲಾತಿ ಜಾರಿಗೆ ಪ್ರಕ್ರಿಯೆ ಪ್ರಾರಂಭಿಸಿದ್ದರೂ, ರಾಜ್ಯದ ಕಾಂಗ್ರೆಸ್ ಸರ್ಕಾರವು, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ಪ್ರಾರಂಭಿಸದಿರುವುದು ಬೇಸರದ ಸಂಗತಿ. ಸರ್ಕಾರವು ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಜನಾಂದೋಲನವನ್ನು ರೂಪಿಸಿ, ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಮುಖಂಡರುಗಳು ಎಚ್ಚರಿಸಿದರಲ್ಲದೇ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿ ಘೋಷಿಸಿದಂತೆ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿದರು.
ಒಳ ಮೀಸಲಾತಿ ಜಾರಿಗೆ ಬರುವವರೆಗೆ, ರಾಜ್ಯ ಸರ್ಕಾರವು ಬ್ಯಾಕ್ಲಾಗ್ ಸೇರಿದಂತೆ ಯಾವುದೇ ಹುದ್ದೆಗಳನ್ನು ತುಂಬಬಾರದು, ನೇಮಕಾತಿ ಮಾಡಿಕೊಳ್ಳಬಾರದು ಎಂದು ಹೋರಾಟ ಸಮಿತಿಯ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಹೆಚ್.ಹನುಮಂತಪ್ಪ ಸೇರಿದಂತೆ, ಮುಖಂಡರುಗಳಾದ ಎ.ಈಶ್ವರಪ್ಪ, ಸಿ.ಸೋಮಶೇಖರ್, ಹೆಚ್.ಹುಸೇನಪ್ಪ, ಎ.ಕೆ.ಹುಲುಗಪ್ಪ, ಜೆ.ಮಲ್ಲಿಕಾರ್ಜುನ, ಚಿಕ್ಕ ಗಾದಿಲಿಂಗಪ್ಪ, ರಾಜೇಶ್, ರಾಮಣ್ಣ ಚೇಳ್ಳಗುರ್ಕಿ, ಅರುಣಾಚಲಂ, ಮಹಾನಂದಿಕೊಟ್ಟA ಪ್ರಸಾದ್, ಹಿರಿಯ ಧುರೀಣ ಕೆ.ಗಿರಿಮಲ್ಲಪ್ಪ, ಎ.ಕೆ.ಗಂಗಾಧರ್, ಡಿ.ವಿಜಯ್ಕುಮಾರ್, ಹೆಚ್.ರಮೇಶ್, ನೆಟ್ಟಪ್ಪ, ಸಣ್ಣ ಹೊನ್ನೂರಪ್ಪ, ವೀರಸ್ವಾಮಿ, ಹೆಚ್.ವಿಜಯ್ಕುಮಾರ್, ಶಿವರಾಜ್, ಸುಂಕಪ್ಪ, ಶಂಕರ್, ಕರ್ಚೇಡು ಶ್ರೀನಿವಾಸ್, ಶಂಕರಪ್ಪ, ಶ್ರೀನಿವಾಸ್ ಭಂಡಾರಿ, ಬಿ.ಗುರುಸಿದ್ದಪ್ಪ, ದುರುಗೇಸ್, ಕುರುವಳ್ಳಿ ಬಾಬು, ರಾಜು, ಹಂಪಣ್ಣ, ನಾಗಭೂಷಣ್, ತಿಪ್ಪೇಸ್ವಾಮಿ, ಪಂಪಾಪತಿ, ಆಂಜನೇಯ, ದಾನÀಪ್ಪ, ಹೊನ್ನೂರ್ಸ್ವಾಮಿ, ನಾಗರಾಜ್, ಮತ್ತು ಇತರೇ ಪ್ರಮುಖರು ಪಾಲ್ಗೊಂಡಿದ್ದರು.
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ